(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜೂ. 19. ತುಂಗಾ ನದಿಗೆಈಜಲು ತೆರೆಳಿದ್ದ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲಾಗಿರುವ ಘಟನೆ ತೀರ್ಥಹಳ್ಳಿಯ ತೀರ್ಥಮತ್ತೂರು ಗ್ರಾಮದಲ್ಲಿ ನಡೆದಿದೆ.
ಮೃತ ಪನ್ಯಾಸಕರನ್ನು ಪುನೀತ್ (38 ) ಮತ್ತು ಬಾಲಾಜಿ (36 ) ಎಂದು ಗುರುತಿಸಲಾಗಿದೆ. ಉಪನ್ಯಾಸಕರಿಬ್ಬರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದು, ತೀರ್ಥಮತ್ತೂರು ಮಠದ ಬಳಿಯ ಹೋಮ್ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಇವರು, ಈಜಾಡಲೆಂದು ತುಂಗಾ ನದಿಗೆ ಇಳಿದಿದ್ದರು. ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.