(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 19. ಕ್ಷುಲ್ಲಕ ಕಾರಣಕ್ಕೆ ತಂದೆಯೊಡನೆ ಜಗಳವಾಡಿದ ಸಹೋದರಿಯರಿಬ್ಬರು ಮನೆಬಿಟ್ಟು ಹೋದ ಘಟನೆ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
10 ಮತ್ತು 9ನೇ ತರಗತಿ ಓದುತ್ತಿರುವ ಇಬ್ಬರು ಸಹೋದರಿಯರಿಬ್ಬರು ಮೊದಲು ಚಾಕ್ಲೆಟ್ ತಿಂದು ಬಳಿಕ ಅಂಗಡಿಯವನಿಗೆ ಹಣ ಕೊಡಬೇಕು ಎಂದು ತಂದೆ ಬಳಿ ಕೇಳಿದ್ದಾರೆ. ಈ ವೇಳೆ ತಂದೆ, ತಮ್ಮ ಅನುಮತಿಯಿಲ್ಲದೇ ಅಂಗಡಿಗೆ ಹೋಗಿದ್ದಕ್ಕೆ ಮಕ್ಕಳಿಗೆ ಬೈದಿದ್ದಲ್ಲದೇ ನಾನು ಹಣ ಕೊಡಲ್ಲ ಎಂದು ಹೇಳಿದ್ದಾರೆ. ಬಾಲಕಿಯರು ದಿಢೀರ್ ಕಣ್ಮರೆ ಆಗಿದ್ದರಿಂದ ಆತಂಕಗೊಂಡ ಪೋಷಕರು ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾದ ಮಕ್ಕಳನ್ನು ಪೊಲೀಸರು ಧರ್ಮಸ್ಥಳದಲ್ಲಿ ಪತ್ತೆ ಮಾಡಿದ್ದಾರೆ. ಮಕ್ಕಳು ಫ್ರೀ ಟಿಕೆಟ್ ಪಡೆದು ಬಸ್ ಹತ್ತಿದ್ದರು ಎನ್ನಲಾಗಿದೆ.