ಲಂಡನ್ ನಲ್ಲಿ ಮತ್ತೋರ್ವ ಯುವಕನ ಹತ್ಯೆ

(ನ್ಯೂಸ್ ಕಡಬ) newskadaba.com ಲಂಡನ್, ಜೂ. 19. ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್‌ನ ಯುವತಿಯೊಬ್ಬಳನ್ನು ಚೂರಿಯಲ್ಲಿ ಇರಿದು ಕೊಲೆ ಮಾಡಿರುವ ಘಟನೆ ಲಂಡನ್‌ನಲ್ಲಿ ನಡೆದಿದ್ದು, ಇದೀಗ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.

ಹತ್ಯೆಗೊಳಗಾದವರನ್ನು ಕ್ಯಾಂಬರ್‌ವೆಲ್‌ನ ಸೌತಾಂಪ್ಟನ್ ವೇನಲ್ಲಿ ಭಾರತೀಯ ಮೂಲದ ಅರವಿಂದ್ ಶಶಿಕುಮಾರ್ (38) ಎಂದು ಗುರುತಿಸಲಾಗಿದೆ. ಹತ್ಯೆ ಸಂಬಂಧ ಸಲ್ಮಾನ್ ಸಲೀಂ (25) ಎಂಬಾತನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೂ.20 ರವರೆಗೆ ಕಸ್ಟಡಿಗೆ ನೀಡಲಾಗಿದೆ.

Also Read  ಬೆಳ್ತಂಗಡಿ: ಒಂಟಿ ವೃದ್ದೆ ಕೊಲೆ ಪ್ರಕರಣ ➤ಆರೋಪಿ ಅರೆಸ್ಟ್

error: Content is protected !!
Scroll to Top