ಕಾಡಾನೆ ದಾಳಿ ➤ ಅಕ್ಕ ಮೃತ್ಯು, ತಂಗಿ ಗಂಭೀರ

(ನ್ಯೂಸ್ ಕಡಬ)newskadaba.com  ರಾಮನಗರ, ಜೂ .19 . ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡಾನೆ ಅಕ್ಕ ತಂಗಿಯರ ಮೇಲೆ ದಾಳಿ ನಡೆಸಿದ ಪರಿಣಾಮ ಅಕ್ಕ ಸ್ಥಳದಲ್ಲೇ ಮೃತಪಟ್ಟು, ತಂಗಿ ಗಂಭೀರ ಗಾಯಗೊಂಡ ಘಟನೆ ಕನಕಪುರ ತಾಲೂಕಿನ ಅಚ್ಚಲು ಗ್ರಾಮದಲ್ಲಿ ನಡೆದಿದೆ.

ಮೃತ ಪಟ್ಟವರನ್ನು ಜಯಮ್ಮ (50) ಎಂದು ಗುರುತಿಸಲಾಗಿದೆ ಹಾಗೂ ವೆಂಕಲಕ್ಷ್ಮಮ್ಮಗೆ (45) ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಸಹೋದರಿಯರು ಜಮೀನಿನಲ್ಲಿ ಎಳ್ಳು ಕೊಯ್ಯಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಗಾಯಾಳು ವೆಂಕಟಲಕ್ಷ್ಮಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ವಿಟ್ಲ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

 

error: Content is protected !!
Scroll to Top