ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಅಡ್ಡಿ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 19.  ಚಾರ್ಮಾಡಿಯಲ್ಲಿ ಸರಕಾರಿ ಬಸ್ ನ್ನು ತಡೆಹಿಡಿದು ಗಲಾಟೆ ಎಬ್ಬಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಬಸ್ ನಿರ್ವಾಹಕ ದೂರು ನೀಡಿದ ದೂರಿನಂತೆ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಾರ್ಮಾಡಿ ಗ್ರಾಮದ ಮುಹಮ್ಮದ್ ಶಬೀರ್, ಮುಹಮ್ಮದ್ ಮಹ್ರೂಫ್ ಹಾಗೂ ಮುಹಮ್ಮದ್ ಮುಬಶ್ಶಿರ್ ಎಂದು ಗುರುತಿಸಲಾಗಿದೆ. ಶನಿವಾರದಂದು ಸಂಜೆ ಮಂಗಳೂರಿನಿಂದ ಮೂಡಿಗೆರೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಉಜಿರೆಯಲ್ಲಿ ಹತ್ತಿದ ಚಾರ್ಮಾಡಿ ಕಡೆಯ ವಿದ್ಯಾರ್ಥಿಗಳು ಬಾಗಿಲಲ್ಲಿ ನೇತಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಬಸ್ ನಿರ್ವಾಹಕ ವಿದ್ಯಾರ್ಥಿಗಳ ಜೊತೆ ಒಳಗೆ ಬನ್ನಿ ಇಲ್ಲವೇ ಬಸ್ ನಿಂದ ಇಳಿದು ಹಿಂದಿನಿಂದ ಬರುವ ಬೇರೆ ಬಸ್ ನಲ್ಲಿ ಬನ್ನಿ ಎಂದು ಸೂಚಿಸಿದಾಗ ಮಾತಿನ ಚಕಮಕಿ ನಡೆದಿದೆ. ಇದರ ನಡುವೆ ಬಸ್ ನಿರ್ವಾಹಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಗುಂಪೊಂದು ಚಾರ್ಮಾಡಿಯಲ್ಲಿ ಬಸ್ ನ್ನು ತಡೆಹಿಡಿದಿದೆ. ಈ ಕುರಿತು ಬಸ್ ನಿರ್ವಾಹಕ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ಬಂದಿಸಿದ್ದಾರೆ.

Also Read  ಬೆಳ್ಳಾರೆ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ➤ ಮತ್ತಿಬ್ಬರು ಆರೋಪಿಗಳ ಬಂಧನ

error: Content is protected !!
Scroll to Top