(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 17. ಸದಾ ಒಂದಿಲ್ಲ ಒಂದರಲ್ಲಿ ಆಕ್ಟೀವ್ ಆಗಿ ಇರುತ್ತಿದ್ದಂತಹ ಸ್ಯಾಂಡಲ್ ವುಡ್ ನಟ ಜಗ್ಗೇಶ್ ಅವರು ಈಗ ಕಾಲು ಮುರಿದುಕೊಂಡ ಕಾರಣ ಸಂಪೂರ್ಣ ವಿಶ್ರಾಂತಿಯಲ್ಲಿ ಇದ್ದಾರೆ.
ಈ ಕುರಿತಂತೆ ಅವರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಣ್ಣ ಅಚಾತುರ್ಯ. ನಡಿಗೆಯಿಂದ ಪಾದದ ಮೂಳೆ ಮುರಿತ. 6 ವಾರದ ದಿಗ್ಭಂಧನ ನಡಿಗೆಗೆ ಎಂದು ತಿಳಿಸಿದ್ದಾರೆ. ಟ್ವಿಟ್ ನಲ್ಲಿ ಹಂಚಿಕೊಂಡಿರುವಂತ ಪೋಟೋದಲ್ಲಿ ಅವರ ಎಡಗಾಲಿನ ಮೊಳಕಾಲು ಕಳೆಗಿನಿಂದ ಪಾದದವರೆಗೆ ಬ್ಯಾಂಡೇಜ್ ಸುತ್ತಿಕೊಳ್ಳಲಾಗಿದೆ. ಹೀಗಾಗಿ ಅವರು ಕಾಲು ಮುರಿದುಕೊಂಡಿರುವುದಾಗಿ ತಿಳಿದು ಬಂದಿದೆ.