(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 17. ಖಾಸಗಿ ಬಸ್ ಚಾಲಕರೋರ್ವರು ಹೃದಯಾಘಾತದಿಂದ ನಿಧನರಾದ ಘಟನೆ ಕನ್ಯಾನ ಬಂಡಿತ್ತಡ್ಕ ಸಮೀಪ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ವಿಟ್ಲ: ಹೃದಯಾಘಾತ- ಬಸ್ ಚಾಲಕ ನಿಧನ
