ಯುವತಿ ನಾಪತ್ತೆ- ಪತ್ತೆಗೆ ಮನವಿ

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 17. ಮುಕ್ಕ ಮಿತ್ರಪಟ್ನ ಮಾತೃ ಛಾಯಾ ನಿವಾಸದ ಸ್ಪೂರ್ತಿ(17) ಜೂ. 08ರಿಂದ ಕಾಣೆಯಾಗಿರುವ ಬಗ್ಗೆ ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದವರ ಚಹರೆ ಇಂತಿವೆ:

ಎತ್ತರ: 5 ಅಡಿ, ಕಪ್ಪು ಕೂದಲು, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿರುತ್ತಾರೆ. ಬಿಳಿ ಬಣ್ಣದ ಟೀಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಬಲಕುತ್ತಿಗೆಯಲ್ಲಿ ಬಿಳಿ ಬಣ್ಣದ 3 ಇಂಚಿನ ಮಚ್ಚೆ ಇದೆ ಹಾಗೂ ಕುತ್ತಿಗೆಯಲ್ಲಿ ಚಿನ್ನದ ಸರ ಹಾಗೂ ಸಣ್ಣ ತಾಯಿತ ಇರುತ್ತದೆ. ಕನ್ನಡ, ತುಳು ಮಾತನಾಡುತ್ತಾರೆ. ಈ ಚಹರೆಯ ಯುವತಿ ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ:0824-2220540, 9480805360, 9480802345 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್:0824-2220800ಗೆ ಕರೆ ಮಾಡುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನ ಮೇಲೆ ಕಾಡಾನೆ ದಾಳಿ

error: Content is protected !!
Scroll to Top