(ನ್ಯೂಸ್ ಕಡಬ)newskadaba. ಬೆಂಗಳೂರು, ಜೂ . 17 . ಉಚಿತ ವಿದ್ಯುತ್ ನೀಡಲು ಮುಂದಾಗಿರುವ ಸರ್ಕಾರ ಇದೀಗ ಸೋಲಾರ್ ಸಬ್ಸಿಡಿ ರದ್ದುಪಡಿಸಿದೆ.
ಸೋಲಾರ್ ಬಳಸುತ್ತಿದ್ದ ಗ್ರಾಹಕರಿಗೆ ಪ್ರತೀ ತಿಂಗಳು ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿ KERC ಆದೇಶ ಹೊರಡಿಸಿದೆ. ಅದರಂತೆ 2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಪ್ರತೀ ಯೂನಿಟ್ಗೆ 50 ಪೈಸೆಯಂತೆ ನೀಡುತ್ತಿದ್ದ ಸಬ್ಸಿಡಿ ರದ್ದುಪಡಿಸಲಾಗಿದೆ. ಬ್ಯಾಂಕ್ ಮೂಲಕ ಆಟೋಮೆಟಿಕ್ ಬಿಲ್ ಪಾವತಿ ಮಾಡುವಾಗ ನೀಡುತ್ತಿದ್ದ 0.25% ರಿಯಾಯಿತಿ ಸೌಲಭ್ಯವನ್ನು ಕೂಡಾ ರದ್ದುಗೊಳಿಸಿದೆ.