ಫೆ.03: ಅಬ್ಬಕ್ಕ ಉತ್ಸವದ ಅಂಗವಾಗಿ ಕ್ರೀಡೋತ್ಸವ ► ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.23. 2017-18ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ದ. ಕ. ಜಿಲ್ಲಾಡಳಿತ, ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ರಾಜ್ಯಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾಟವು ಫೆಬ್ರವರಿ 3 ರಂದು ಸೋಮೇಶ್ವರ ಗ್ರಾಮದ ಕೊಲ್ಯ ಮೈದಾನದಲ್ಲಿ ನಡೆಯಲಿದೆ.

ಕುಸ್ತಿ ಪಂದ್ಯಾಟವು ಏಳು ವಿಭಾಗಗಳಲ್ಲಿ (44ಕೆ.ಜಿ, 48ಕೆ.ಜಿ., 53 ಕೆ.ಜಿ., 58ಕೆ. ಜಿ., 63ಕೆ.ಜಿ., 69ಕೆ.ಜಿ., 73ಕೆ. ಜಿ.) ನಡೆಯಲಿದ್ದು, 53 ಕೆ. ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತರಿಗೆ ಅಬ್ಬಕ್ಕ ಶ್ರೀ ಗೌರವ ನೀಡಿ ಪುರಸ್ಕರಿಸಲಾಗುವುದು. ಪುರುಷರ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳಿಗೆ ಫುಟ್‍ಬಾಲ್ ಪಂದ್ಯಾಟವನ್ನು ಫೆಬ್ರವರಿ 3 ರಂದು ಉಳ್ಳಾಲ ಭಾರತ್ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಮಹಿಳಾ ಕುಸ್ತಿ ಮತ್ತು ಪುರುಷರ ಫುಟ್‍ಬಾಲ್ ಪಂದ್ಯಾಟದ ವಿಜೇತರಿಗೆ ನಗದು ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು.

Also Read  ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ- ಯುವಕ ಮೃತ್ಯು..!

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಕುಸ್ತಿಪಟುಗಳು ಮತ್ತು ಫುಟ್‍ಬಾಲ್ ತಂಡಗಳು ವಿವರವಾದ ಪ್ರವೇಶ ಪತ್ರವನ್ನು ಜನವರಿ 27 ರ ಒಳಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ದ. ಕ. ಜಿಲ್ಲೆ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ. 0824-2451264,  9448251523, 9902747835ಯನ್ನು ಸಂಪರ್ಕಿಸಲು ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top