ಪುತ್ತೂರು: ನಾಳೆ (ಜೂ. 17) ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 16. ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಕಬಕ, ಕೆದಿಲ ಮತ್ತು ನಗರ ಫೀಡರ್‌ನಲ್ಲಿ ಜೂ.17ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 2ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದ್ದರಿಂದ 110/33/11 ಕೆ.ವಿ ಮತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಕಬಕ, ಕೆದಿಲ ಹಾಗೂ ನಗರ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ನಗರ, ಕಬಕ, ಕೊಡಿಪ್ಪಾಡಿ, ಬನ್ನೂರು, ಬಲ್ನಾಡು, ನವನಗರ, ವಿವೇಕಾನಂದ ಕಾಲೇಜು ಪರಿಸರ, ಪಡ್ಡಾಯೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ, ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Also Read  ಕಡಬ: ಇಂದು (ಸೆ.26) ವಿದ್ಯುತ್ ನಿಲುಗಡೆ

error: Content is protected !!
Scroll to Top