ಮಂಗಳೂರು: ಆನ್-ಲೈನ್ ವಂಚನೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. ಆನ್-ಲೈನ್ ಗೂಗಲ್ ರಿವೀವ್ ಟಾಸ್ಕ್ ಕೆಲಸ ಮಾಡಿದಲ್ಲಿ ಕಮಿಷನ್ ನೀಡುವುದ಻ಗಿ ನಂಬಿಸಿ ಸುಮಾರು 1,15,180ರೂ. ವಂಚಿಸಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ವ್ಯಕ್ತಿಗೆ ಜೂ. 06ರಂದು ಅಪರಿಚಿತನೋರ್ವ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಗೂಗಲ್ ರಿವೀವ್ ಟಾಸ್ಕ್ ಕೆಲಸ ಮಾಡಿದರೆ ಕಮಿಷನ್ ಕೊಡುವುದಾಗಿ ತಿಳಿಸಿ ಲಿಂಕ್ ಕಳಿಸಿದ್ದ. ಇದನ್ನು ನಂಬಿದ ದೂರುದಾರ ವ್ಯಕ್ತಿ ಮೂರು ಟಾಸ್ಕ್ ಗಳನ್ನು ಪೂರ್ಣಗೊಳಿಸಿದ್ದರು. ನಂತರ ಒಂಧು ಟಾಸ್ಕ್ ಗೆ 50 ರೂ.ನಂತೆ 150ರೂ. ದೂರುದಾರರ ಖಾತೆಗೆ ಪಾವತಿಸಲಾಗಿತ್ತು. ಬಳಿಕ ದೂರುದಾರರು ಟಾಸ್ಕ್ ಮುಂದುವರಿಸಿದ್ದು, ಬೇರೆ ಬೇರೆ ಬ್ಯಾಂಕ್ ಖಾತೆಯಿಂದ 1,15,180 ರೂ. ಪಾವತಿದಿ ಮೋಸ ಹೋಗಿರುವ ಕುರಿತು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Also Read  ಉದ್ಯಮಿಗೆ ವಂಚನೆ ಆರೋಪ - ಚೈತ್ರಾ ಕುಂದಾಪುರ ಖಾಕಿ ಬಲೆಗೆ

error: Content is protected !!
Scroll to Top