118 ಕೋಟಿ ರೂ. ನಕಲಿ ಬಿಲ್ ಹಗರಣ ➤ 8 ಬಿಬಿಎಂಪಿ ಇಂಜಿನಿಯರ್ ಗಳ ಅಮಾನತು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 16. 118ಕೋಟಿ ರೂ. ಮೊತ್ತದ ನಕಲಿ ಬಿಲ್ ಸೃಷ್ಟಿಸಿದ ಆರೋಪದಲ್ಲಿ ಬಿಬಿಎಂಪಿಯ 8 ಇಂಜಿನಿಯರ್ ಗಳನ್ನು ರಾಜ್ಯ ಸರಕಾರ ಅಮಾನತುಗೊಳಿಸಿದೆ.

ಆರ್.ಆರ್ ನಗರದ ವಿಧಾಸಭಾ ಕ್ಷೇತ್ರದಲ್ಲಿ ಬಿಬಿಎಂಪಿಯಿಂದ ಕೆಆರ್.ಐಡಿಎಲ್ ಗೆ ವಹಿಸಲಾಗಿದ್ದ ಕೆಲಸಗಳನ್ನು ಮಾಡದೇ ಬಿಲ್ ಮೊತ್ತ ಬಿಡುಗಡೆಯಾಗಿರುವುದು  ಲೋಕಾಯುಕ್ತ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತರ ಶಿಫಾರಸಿನ ಮೇರೆಗೆ ಸರಕಾರವು ಅಮಾನತು ಮಾಡಿದೆ. ಅಲ್ಲದೇ ಈ ಹಗರಣಕ್ಕೆ ಸಂಬಂಧಿಸಿದ ತನಿಖೆಗೆ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಬಿಸ್ವಾಸ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದೆ.

Also Read  ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ

error: Content is protected !!
Scroll to Top