ಬಂಟ್ವಾಳ: ಪತ್ನಿ ಹಾಗೂ ಮಾವನಿಗೆ ಚೂರಿಯಿಂದ ಇರಿದು ಪತಿ ಪರಾರಿ..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 16. ಕುಟುಂಬದ ಮನಸ್ತಾಪದ ವಿಚಾರಕ್ಕೆ ಸಂಬಂಧಿಸಿ ಪತ್ನಿ ಹಾಗೂ ಮಾವನಿಗೆ ಆರೋಪಿ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌ ನಲ್ಲಿ ನಡೆದಿದೆ.

ಜೂನ್ 15ರ ಗುರುವಾರದಂದು ರಾತ್ರಿ 10.30ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಅಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ‌ಕಡೆಗೆ ತೆರಳುತ್ತಿದ್ದ ವೇಳೆ, ದಿವ್ಯಾಳ ಗಂಡ ಆರೋಪಿ ಕುಮಾರ ಎಂಬಾತ ಆಟೋವನ್ನು ತುಂಬೆ ಜಂಕ್ಷನ್ ನಲ್ಲಿ ತಡೆದು, ಚೂರಿ ಹಿಡಿದುಕೊಂಡು ಬಂದು ಪತ್ನಿ ದಿವ್ಯಾಳಿಗೆ ಇರಿಯಲು ಯತ್ನಿಸಿದ್ದಾನೆ. ಈ ಸಂದರ್ಭ ಬಿಡಿಸಲು ಹೋದ ಮಾವ ರಾಜೀವರಿಗೆ ಆತ ಚೂರಿಯಿಂದ ಇರಿದಿದ್ದು, ಮೂವರ ಮಧ್ಯೆಯೂ ತಳ್ಳಾಟ ನಡೆದು ರಾಜೀವ ಹಾಗೂ ದಿವ್ಯ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Also Read  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 88ನೇ ಸರ್ವ ಧರ್ಮ ಸಮ್ಮೇಳನ

error: Content is protected !!
Scroll to Top