ಎನ್ಎಂಎಂಎಲ್ ಮರುನಾಮಕರಣ ➤ಪ್ರಧಾನಿ ಮೋದಿ ವಿರುದ್ದ ತರಾಟೆಯೆತ್ತಿದ ಜೈರಾಂ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 16. ಕೇಂದ್ರ ಸರಕಾರವು ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಗೆ ಮರುನಾಮಕರಣ ಮಾಡಿ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದು ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ಕಾಂಗ್ರೆಸ್ ಕಿಡಿಕಾರಿದೆ.

ಎನ್ಎಂಎಂಎಲ್ ನ್ನು ಇನ್ನು ಮುಂದೆ ಪ್ರೈಮ್ ಮಿನಿಸ್ಟರ್ಸ್ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ವರದಿ ಕೇಳಿಬಂದ ಹಿನ್ನೆಲೆ ಪ್ರಧಾನಿ ಮೋದಿ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.ಎನ್ಎಂಎಂಎಲ್ ಜಾಗತಿಕ ಬೌದ್ಧಿಕ ಹೆಗ್ಗುರುತು. ಇದೊಂದು ಗ್ರಂಥ ಭಂಡಾರವಾಗಿದೆ. ಪ್ರಧಾನಿ ಮೋದಿ ಭಾರತೀಯ ರಾಷ್ಟ್ರ-ರಾಜ್ಯದ ವಾಸ್ತುಶಿಲ್ಪಿಯ ಹೆಸರು ಮತ್ತು ಪರಂಪರೆಯನ್ನು ವಿರೂಪಗೊಳಿಸಲು, ಅವಹೇಳನ ಮಾಡಲು ಮತ್ತು ನಾಶಮಾಡಲು ಏನು ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.ಕ್ಷುಲ್ಲಕತೆ ಮತ್ತು ಪ್ರತೀಕಾರ ಇನ್ನೊಂದು ಹೆಸರೇ ಮೋದಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಭಾರತೀಯ ರಾಷ್ಟ್ರ-ರಾಜ್ಯದ ವಾಸ್ತುಶಿಲ್ಪಿಯ ಹೆಸರು ಮತ್ತು ಪರಂಪರೆಯನ್ನು ವಿರೂಪಗೊಳಿಸಲು, ಅವಹೇಳನ ಮಾಡಲು ಮತ್ತು ನಾಶಮಾಡಲು ಮೋದಿ ಏನು ಬೇಕಾದರೂ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.

Also Read  ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ

error: Content is protected !!
Scroll to Top