ಪ್ರಯಾಣಿಕನಿಂದ 5ಲಕ್ಷ ರೂ. ಕದ್ದು ಪರಾರಿಯಾಗಲೆತ್ನಿಸಿದ ಆರೋಪಿಯನ್ನು ಸೆರೆಹಿಡಿದ ಕೆಎಸ್ಸಾರ್ಟಿಸಿ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 16. ಪ್ರಯಾಣಿಕರೋರ್ವರು ಊಟಕ್ಕೆ ಕುಳಿತಿದ್ದ ವೇಳೆ ಅವರ ಬಳಿ ಇದ್ದ 5 ಲಕ್ಷ ರೂ. ನಗದನ್ನು ಕದ್ದು ಪರಾರಿಯಾಗುತ್ತಿದ್ದ ಸಹ ಪ್ರಯಾಣಿಕನೊಬ್ಬನನ್ನು ಕೆಎಸ್ಸಾರ್ಟಿಸಿ ಚಾಲಕನ ಸಮಯಪ್ರಜ್ಞೆಯಿಂದ ವಾಪಾಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು- ತಿರುನಲ್ಲೂರ್ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದ ಬಸ್ ನ ಆಸನ ಸಂಖ್ಯೆ 17-18ರಲ್ಲಿ ಪ್ರಯಾಣಿಕನ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿ ಬಸ್ಸಿನ ಆಸನ ಸಂಖ್ಯೆ 29-30ರಲ್ಲಿ ಕುಳಿತಿದ್ದ ದಂಪತಿ ಊಟಕ್ಕೆಂದು ಕೆಳಗಿಳಿದಾಗ ಅವರ ಬಳಿಯಿದ್ದ 5 ಲಕ್ಷ ರೂ. ಹಣವನ್ನು ಕದ್ದು ಓಡಿಹೋಗುತ್ತಿದ್ದುದನ್ನು ಗಮನಿಸಿದ ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ಸೋಮಪ್ಪ ಟಿ.ಎನ್ ಪ್ರಯಾಣಿಕನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿ ಶೌರ್ಯ ಮೆರೆದಿದ್ದಾರೆ.

Also Read  ಬ್ರಹ್ಮಾವರ: ವಿವಾಹಿತ ಮಹಿಳೆ ನಾಪತ್ತೆ

error: Content is protected !!
Scroll to Top