ನಗರ ರಾಜಭಾಷಾ ಸಮಿತಿಯ ಅರ್ಧ ವಾರ್ಷಿಕ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. ನಗರ ರಾಜ ಭಾಷಾ ಸಮಿತಿ (TOLIC)ಯ 72ನೆಯ ಅರ್ಧ ವಾರ್ಷಿಕ ಸಭೆಯು ಜೂನ್ 14ರಂದು ಮಂಗಳೂರಿನ ಪಾಂಡೇಶ್ವರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜರಗಿತು.

ಬ್ಯಾಂಕಿನ ಮಂಗಳೂರು ವಲಯ ಮುಖ್ಯಸ್ಥರು ಹಾಗೂ ಮಹಾಪ್ರಬಂಧಕ ಶ್ರೀಮತಿ ರೇಣು ಕೆ ನಾಯರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರಕಾರದ ಗೃಹ ಸಚಿವಾಲಯದ ರಾಜಭಾಷಾ ವಿಭಾಗದ ಬೆಂಗಳೂರಿನ ವಲಯ ಅನುಷ್ಠಾನ ಕಚೇರಿಯ ಉಪನಿರ್ದೇಶಕರಾದ ಶ್ರೀ ಅನಿರ್ಬಾನ್ ಕುಮಾರ್ ವಿಶ್ವಾಸ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ನಗರ ರಾಜಭಾಷಾ ಸಮಿತಿಯ ಸದಸ್ಯ ಸಂಸ್ಥೆಗಳಾದ, ಕೇಂದ್ರ ಸರ್ಕಾರದ ಹಲವು ಕಚೇರಿಗಳು, ಸರಕಾರಿ ಸ್ವಾಮಿತ್ವದ ಸಂಸ್ಥೆಗಳು, ಸಾರ್ವಜನಿಕ ವಿತ್ತ ಸಂಸ್ಥೆಗಳು, ಇನ್ನಿತರ ರಾಜಭಾಷಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Also Read  Up X casino онлайн - Слоты и игровые автоматы с бонусами

error: Content is protected !!
Scroll to Top