ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

(ನ್ಯೂಸ್ ಕಡಬ)newskadaba.com ಮುಂಬೈ, ಜೂ . 15 . ಯುವಕನೊಬ್ಬ ರೀಲ್ಸ್​ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಮುಂಬೈ ಬಳಿ ನಡೆದಿದೆ.


ಮೃತನನ್ನು ಬಿಲಾಲ್ ಸೋಹಿಲ್ ಶೇಖ್ (18) ಎಂದು ಗುರುತಿಸಲಾಗಿದೆ, ಈತ  ಚೋಲೆ ಪ್ರದೇಶದಲ್ಲಿ ನೀರು ಸರಬರಾಜು ಮಾಡುವ ಬ್ರಿಟಿಷ್ ಪಂಪ್​ ಹೌಸ್​ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ . ಬ್ರಿಟಿಷ್​ ಪಂಪ್​ ಹೌಸ್​ಗೆ ಜನಸಾಮಾನ್ಯರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಈ ಪ್ರದೇಶದಲ್ಲಿ ಪ್ರತಿದಿನ ಸಾಯಂಕಾಲ ವಾಯುವಿಹಾರಕ್ಕೆ ಬರಲು ಅವಕಾಶವಿದೆ. ಇದೇ ನೆಪದಲ್ಲಿ  ಬಂದ ಬಿಲಾಲ್​ ಹಾಗೂ ಆತನ ಸ್ನೇಹಿತರು ಇಲ್ಲಿನ ಸಿಬ್ಬಂದಿಗೆ ಕಣ್ತಪ್ಪಿಸಿ ಪಂಪ್​ ಹೌಸ್​ ಬಳಿ ರೀಲ್ಸ್​ ಮಾಡುತ್ತಿದ್ದ  ವೇಳೆ ಬಿಲಾಲ್ ಪಂಪ್ ಹೌಸ್‌ಗೆ ಬಿದ್ದಿದ್ದಾನೆ. ಕೂಡಲೇ ಆತನ ಸ್ನೇಹಿತರು ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ನೀರಿನಲ್ಲಿ ಹುಡುಕಾಟ ನಡೆಸಿದರೂ ಯುವಕ ಮಾತ್ರ ಪತ್ತೆಯಾಗಿರಲಿಲ್ಲ. ಕೊನೆಗೆ ಎರಡು ದಿನಗಳ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಯುವಕನ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ? ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಭಿಕ್ಷುಕನ ಹತ್ಯೆ ➤ ಆರೋಪಿಗಳಿಗಾಗಿ ಶೋಧಕಾರ್ಯ

 

 

error: Content is protected !!
Scroll to Top