ಆನ್-ಲೈನ್ ವಂಚನೆ ಜಾಲ “ಪಿಂಕ್ ವಾಟ್ಸಾಪ್” ➤ ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 15. ಆನ್-ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸಾಪ್ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ನಿರ್ದೇಶನ ನೀಡಿದೆ.

ಪಿಂಕ್ ವಾಟ್ಸಾಪ್ ನ್ನು ಹೆಚ್ಚಿನ ಫ್ಯೂಚರ್ಸ್‌ಗಳೊಂದಿಗೆ ಹೊಸ ರೂಪದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದ್ದು, ಇದನ್ನು ಅಗತ್ಯವಾಗಿ ಪ್ರಯತ್ನಿಸಿ ಎಂಬ ಲಿಂಕ್‌ನೊಂದಿಗೆ ಮೊಬೈಲ್ ಗಳಿಗೆ ಎಸ್‌ಎಂಎಸ್ ಬರುತ್ತಿದ್ದು, ಇದನ್ನು ನಂಬಿದ ಸಾಕಷ್ಟು ಮಂದಿ ನಕಲಿ ಪಿಂಕ್ ವಾಟ್ಸಾಪ್‌ ಅನ್ನು ಇನ್‌ಸ್ಟಾಲ್ ಮಾಡುತ್ತಿದ್ದಾರೆ. ಇದರ ಪರಿಣಾಮ ಹ್ಯಾಕರ್ಸ್‌ಗಳು ಮೊಬೈಲ್‌ನಲ್ಲಿರುವ ಫೋಟೋಗಳು, ಕಾಂಟಾಕ್ಟ್‌ಗಳು, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಹಾಗೂ ಎಸ್‌ಎಂಎಸ್‌ಗಳು ಸೇರಿದಂತೆ ಎಲ್ಲ ರೀತಿಯ ಮಾಹಿತಿಗಳನ್ನು ಕದಿಯಬಹುದು. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಪಿಂಕ್ ವಾಟ್ಸಾಪ್ ಇನ್‌ಸ್ಟಾಲ್ ಮಾಡಿದ್ದರೆ ಅದನ್ನು ಕೂಡಲೇ ಅನ್ ‌ಇನ್‌ಸ್ಟಾಲ್ ಮಾಡಿ, ಎಲ್ಲ ವಾಟ್ಸಾಪ್ ವೆಬ್ ಸಾಧನಗಳನ್ನು ಅನ್ ಲಿಂಕ್ ಮಾಡಬೇಕು. ಸೆಟ್ಟಿಂಗ್ ‌ಗಳಿಂದ ಬ್ರೌಸರ್ ಸಂಗ್ರಹವನ್ನು ತೆರವುಗೊಳಿಸಬೇಕು. ಎಲ್ಲ ಅಪ್ಲಿಕೇಶನ್‌ಗಳಿಗೆ ಅನುಮತಿಯನ್ನು ಪರಿಶೀಲಿಸಬೇಕು. ಯಾವುದೇ ಅಪ್ಲಿಕೇಶನ್ ಗೆ ಯಾವುದೇ ಅನುಮಾನಾಸ್ಪದ ಅನುಮತಿ ಕಂಡು ಬಂದಲ್ಲಿ ಅದನ್ನು ಹಿಂಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

Also Read  ಕರುವಿನ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಶಫೀ ಉಲ್ಲಾ ಅರೆಸ್ಟ್..!!

error: Content is protected !!
Scroll to Top