ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ, ನಗದು ಹಾಗೂ ಕಾರು ಕಳವುಗೈದು ಪರಾರಿ

Theft, crime, Robbery

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ 15. ಕುಂಬಳೆ ಕೊಡ್ಯಮ್ಮೆ ಚೂರಿತ್ತಡ್ಕದ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಹಾಗೂ ಕಾರನ್ನು ಕಳವುಗೈದ ಘಟನೆ ಬುಧವಾರದಂದು ನಡೆದಿದೆ.

ಬುಧವಾರದಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಕಪಾಟನ್ನು ತೆರೆಯುವ ಶಬ್ದ ಕೇಳಿ ಮನೆಯವರು ಎಚ್ಚೆತ್ತು ಬೊಬ್ಬೆ ಹಾಕಿದಾಗ ಕಳ್ಳರು ಕಳವುಗೈದ ಸೊತ್ತು ಸಹಿತ ಪರಾರಿಯಾಗಿದ್ದಾರೆ. ಮನೆಯ ಬಾಗಿಲು ಹಾಗೂ ಕಿಟಕಿಗೆ ಯಾವುದೇ ಹಾನಿಯಾಗದೇ ಇದ್ದು, ಇದರಿಂದ ಕಳ್ಳರು ಹಗಲು ಸಮಯದಲ್ಲಿ ನುಗ್ಗಿ ಅಡಗಿ ಕುಳಿತು ರಾತ್ರಿ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಳ್ಳರು ಮನೆಯ ಕೆಲ ಅಂತಸ್ತಿನಲ್ಲಿದ್ದ ಮೂರು ಹಾಗೂ ಮೇಲಂತಸ್ತಿನಲ್ಲಿದ್ದ ಎರಡು ಕಪಾಟುಗಳನ್ನು ತೆರೆದು, 10 ಪವನ್ ಚಿನ್ನಾ, 25 ಸಾವಿರ ರೂ. ನಗದು ಹಾಗೂ ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಕಾರನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Also Read  ಬೆಳ್ತಂಗಡಿ: ದೊಣ್ಣೆಯಿಂದ ಹೊಡೆದು ಕೊಲೆಯತ್ನ..! ➤ ವ್ಯಕ್ತಿ ಗಂಭೀರ

error: Content is protected !!
Scroll to Top