ಕಾಸರಗೋಡು: ಅಪ್ರಾಪ್ತ ಯುವಕನಿಗೆ ಮಾದಕ ವಸ್ತು ನೀಡಿ ಕಿರುಕುಳ ಆರೋಪ ➤ ಪಂಚಾಯತ್ ಸದಸ್ಯನ ಬಂಧನ

crime, arrest, suspected

(ನ್ಯೂಸ್ ಕಡಬ)newskadaba.com ಕಾಸರಗೋಡು, ಜೂ. 15. ಅಪ್ರಾಪ್ತ ಬಾಲಕನಿಗೆ ಮಾದಕ ವಸ್ತು ನೀಡಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯತ್ ಸದಸ್ಯನೋರ್ವನನ್ನು ಆದೂರು ಠಾಣಾ ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಕುರಿತು ವರದಿಯಾಗಿದೆ.

ಬಂಧಿತನನ್ನು ಮುಳಿಯಾರು ಪೊವ್ವಲ್ ನ ಮುಹಮ್ಮದ್ ಕುಂಞ ಎಂದು ಗುರುತಿಸಲಾಗಿದೆ. ಈತ ಮಾದಕ ಪದಾರ್ಥ ನೀಡಿ ಕಿರುಕುಳ ನೀಡಿದ್ದಾಗಿ 14ರ ಹರೆಯದ ಬಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ಅರ್ಜಿ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ತನಿಖಾ ತಂಡದ ಮುಂದೆ ಹಾಜರಾಗುವಂತೆ ತೀರ್ಫು ನೀಡಿತ್ತು. ಇದರಂತೆ ಮಂಗಳವಾರ ಸಂಜೆ ಆದೂರು ಠಾಣೆಗೆ ಹಾಜರಾದ ಈತನನ್ನು ಪೊಲೀಸರು ಬಂಧಿಸಿ, ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯವು ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.

Also Read  ಕಾಸರಗೋಡು: ದಾಖಲೆಗಳಿಲ್ಲದೆ ಹಣ ಸಾಗಾಟ ➤ ಆರೋಪಿ ಸಹಿತ 41.78 ಲಕ್ಷ ರೂ ವಶಕ್ಕೆ

error: Content is protected !!
Scroll to Top