ಜೂ. 26ರಂದು ದೇಶದ 5 ಕಡೆ ವಂದೇಭಾರತ್ ರೈಲುಗಳಿಗೆ ಚಾಲನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 15. ಜೂ. 26ರಂದು ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ದೇಶದ ಐದು ಮಾರ್ಗಗಳಲ್ಲಿ ಹೊಸ ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಬೆಂಗಳೂರು-ಹುಬ್ಬಳ್ಳಿ, ಮುಂಬೈ-ಗೋವಾ, ಪಾಟ್ನಾ-ರಾಂಚಿ, ಭೋಪಾಲ್‌-ಇಂದೋರ್‌ ಹಾಗೂ ಭೋಪಾಲ್‌-ಜಬ್ಬಲ್‌ಪುರ ಮಾರ್ಗದಲ್ಲಿ ವಂದೇ ಭಾರತ್‌ ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ. ಒಡಿಶಾ ರೈಲು ದುರಂತದ ಬಳಿಕ ಮುಂಬೈ ಹಾಗೂ ಗೋವಾ ನಡುವಿನ ವಂದೇ ಭಾರತ್‌ ಉದ್ಘಾಟನೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.

error: Content is protected !!
Scroll to Top