ಸಿಇಟಿ ಫಲಿತಾಂಶ ಪ್ರಕಟ  ➤ ಎಕ್ಸ್‌ಪರ್ಟ್ ನ ಬೈರೇಶ್‌ಗೆ ಬಿಎಸ್‌ಸಿಯಲ್ಲಿ ಪ್ರಥಮ ರ್‍ಯಾಂಕ್

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜೂ . 15 . ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ-2023ರ(ಸಿಇಟಿ) ಫಲಿತಾಂಶ ಪ್ರಕಟಗೊಂಡಿದೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್​ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು ಈ ಬಾರಿ ಸಿಇಟಿಯಲ್ಲೂ ಎಲ್ಲ ವಿಭಾಗಗಳಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಮಂಗಳೂರಿನ ಎಕ್ಸ್‌ಪರ್ಟ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಪ್ರಥಮ ರ್ಯಾಂಕ್(96.7%) ಪಡೆದಿದ್ದಾರೆ.  ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ದ್ವಿತೀಯ ಸ್ಥಾನ (98.1%)ಪಡೆದಿದ್ದಾರೆಇಂಜಿನಿಯರಿಂಗ್‌ ವಿಭಾಗದಲ್ಲಿ ವಿಘ್ನೇಶ್‌ ಪ್ರಥಮ ಸ್ಥಾನ, ಅರ್ಜುನ್‌ ಕೃಷ್ಣಸ್ವಾಮಿ, ಸಮೃದ್ಧ್‌ ಶೆಟ್ಟಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಶ್ರೇಣಿ ಪಡೆದಿದ್ದಾರೆ. ಎಸ್. ಸುಮೇದ್‌ ಮತ್ತು ಮಾಧವ ಸೂರ್ಯ ನಾಲ್ಕು ಮತ್ತು ಐದನೇ ರ‍್ಯಾಂಕ್‌ನಲ್ಲಿದ್ದಾರೆ.ಬೆಳಗ್ಗೆ 11 ಗಂಟೆ ನಂತರ http://kea.kar.nic.in ವೆಬ್‌ಸೈಟ್‌ನಲ್ಲಿ ಸಿಇಟಿ ಫಲಿತಾಂಶ ಲಭ್ಯವಾಗಲಿದೆ. ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ವೆಬ್‌ಸೈಟ್‌ ಲಿಂಕ್‌ ಓಪನ್‌ ಮಾಡಿ ನಮೂದಿಸಬೇಕಾಗುತ್ತದೆ.ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ ಮತ್ತು ಫಾರ್ಮಸಿ, ಬಿಎಸ್‍ಸಿ ನರ್ಸಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಸಿಇಟಿಯನ್ನು ನಡೆಸಲಾಗುತ್ತದೆ.

Also Read  ವಿಧಾನಸಭೆಯಲ್ಲೂ ತುಳು ವಿನಲ್ಲೇ 'ಆಯಡ ಪನ್ಲೆ' ಎಂದ ಸ್ಪೀಕರ್ ಯು.ಟಿ.ಖಾದರ್ - ತುಳುವರು ಎಲ್ಲಿ ಹೋದರೂ ಮಾತೃಭಾಷೆ ಬಿಡಲ್ಲ ಎಂದ ನೆಟ್ಟಿಗರು

 

 

error: Content is protected !!
Scroll to Top