ವಿಟ್ಲ: ಜೂ. 21ರಂದು ಹೃದಯ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕಾರ್ಡಿಯಾಲಜಿ ಡೋರ್ ಸ್ಟೆಪ್ ಫೌಂಡೇಶನ್ ಸಂಸ್ಥೆ, ಲಯನ್ಸ್ ಕ್ಲಬ್ ವಿಟ್ಲ ಹಾಗೂ ಜೆಸಿಐ ಅವರ ಸಂಯುಕ್ತಾಶ್ರಯದಲ್ಲಿ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಹಾಗೂ ತಂಡದವರಿಂದ ಹೃದಯ ವೈಶಾಲ್ಯ ಯೋಜನೆ ಹೃದಯ ತಜ್ಞ ಮನೆ ಬಾಗಿಲಿಗೆ ಹೃದಯ ಸಂಬಂಧಿತ ಕಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಇದೇ ಜೂ. 21ರ ಬುಧವಾರ ಬೆಳಿಗ್ಗೆ 9 ಗಂಟೆಯಿಂದ ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

Also Read  ಅಡುಗೆ ಕೋಣೆಯೊಳಗೆ ನುಗ್ಗಿದ ಚಿರತೆ- ಸೆರೆಹಿಡಿದ ಅರಣ್ಯ ಇಲಾಖೆ

ಮಧುಮೇಹ-ರಕ್ತದೊತ್ತಡದಿಂದ ಬಳಲುವವರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು, ಹೃದಯ ಚಿಕಿತ್ಸೆಗೆ ಒಳಗಾದವರು (ಅಂಜಿಯೋಪ್ಲಾಸ್ಟ್, ಬೈಪಾಸ್) ಕಾಂಜಿನಿಟಲ್ ಹಾರ್ಟ್ ಮತ್ತು ರುಮಾಟಿಕ್ ಹಾರ್ಟ್ ತೊಂದರೆಗೊಳಗಾದವರು, ಹೃದಯ ತೊಂದರೆಗೆ ಎರಡನೇ ಅಭಿಪ್ರಾಯ ಬೇಕಾದವರಿಗೆ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.

error: Content is protected !!
Scroll to Top