ಬಟ್ವಾಳ: ನಾಪತ್ತೆಯಾಗಿರುವ ಯುವತಿ ಠಾಣೆಗೆ ಹಾಜರು  ➤ ಮನೆಗೆ ಹೋಗಲು ನಿರಾಕರಣೆ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಜೂ .15 . ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಯುವತಿ ಠಾಣೆಗೆ ಹಾಜರಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಬೈಪಾಸ್ ಬಿ.ಕಸಬಾ ಗ್ರಾಮದ ನಿವಾಸಿ ದಿ.ರಮೇಶ್ ಸಾಲಿಯಾನ್ ಅವರ ಪುತ್ರಿ ಕು. ನೇಹಾ ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಅಲ್ಲಿಗೆ ಹೋಗುವುದೆಂದು ಮನೆಯಿಂದ ಹೋದವಳು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಳು. ಅದೇ ದಿನ ಈಕೆಯ ಚಿಕ್ಕಮ್ಮಳ ಮೊಬೈಲ್ ಗೆ ಮೆಸೇಜ್ ಮಾಡಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ನಾನು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದಲ್ಲದೇ, ಬಳಿಕ ಎರಡು ಪತ್ರಗಳನ್ನು ಬರೆದಿದ್ದು ಅದರಲ್ಲಿ ನಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದಳು. ಇತ್ತ ಮೊಬೈಲ್ ಕೂಡ ಸ್ವಿಚ್ ಆಪ್ ಮಾಡಿದ್ದು, ಮನೆಯವರ ಜೊತೆ ಯಾವುದೇ ಸಂಪರ್ಕ ಮಾಡಿಲ್ಲ. ಈ ಕಾರಣಕ್ಕಾಗಿ ಈಕೆಯ ತಮ್ಮ ಕಾಣೆಯಾಗಿದ್ದಾಳೆ ಎಂದು ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ನೇಹಾ ನೇರವಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಹಾಜರಾಗಿದ್ದು, ನಾನು ಸ್ವ-ಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದು, ನನಗೆ ನನ್ನ ಮನೆಯವರೊಂದಿಗೆ ಹೋಗಲು ಇಚ್ಚೆ ಇರುವುದಿಲ್ಲ. ನಾನು ಮುಂದಕ್ಕೆ ವೃತ್ತಿಯೊಂದಿಗೆ ವಿದ್ಯಾಭ್ಯಾಸ ಮುಂದುವರೆಸಿ ಬದುಕಲು ನಿಶ್ವಯಿಸಿದ್ದು, ಆ ಉದ್ದೇಶದಿಂದ ನಾನು ಉಡುಪಿಯ ಅಜೆಕಾರು ಕುಂಜಿಬೆಟ್ಟು ಎಂಬಲ್ಲಿರುವ ಮಹಿಳೆಯರ ಪಿ.ಜಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಇದ್ದು ನನ್ನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿರುತ್ತೇನೆ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.

Also Read  ಕರಾಟೆ ಸ್ಪರ್ದೆಯಲ್ಲಿ ಕಡಬ ಕ್ನಾನಾಯ ಜ್ಯೋತಿ ಶಾಲೆಗೆ ಪ್ರಶಸ್ತಿ

 

error: Content is protected !!
Scroll to Top