(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 2023ನೇ ಸಾಲಿನ ಮಳೆಗಾಲದ ಅವಧಿಯಲ್ಲಿ ಜೂ.01 ರಿಂದ 2023ರ ಜುಲೈ 31ರ ವರೆಗೆ ಯಾಂತ್ರೀಕೃತ ಮೀನುಗಾರಿಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ.
ಕೇರಳ ಸರ್ಕಾರವು 2023ರ ಜೂನ್ 9 ರಿಂದ 2023ರ ಜುಲೈ 31ರ ವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ) ಯಾಂತ್ರೀಕೃತ ದೋಣಿಗಳ ಟ್ರಾಲಿಂಗ್ ಅನ್ನು ನಿಷೇಧಿಸಿರುವುದರಿಂದ ಹಾಗೂ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಜಿಲ್ಲಾಧಿಕಾರಿಯವರ ಕೋರಿಕೆಯಂತೆ ಕಣ್ಣೂರು ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಮೀನುಗಾರಿಕಾ ದೋಣಿಗಳನ್ನು ತಕ್ಷಣವೇ ವಾಪಾಸ್ಸು ಕರೆಸುವಂತೆ ಹಾಗೂ ನಿಷೇಧಿತ ಅವಧಿಯಲ್ಲಿ ಮೀನುಗಾರಿಕೆಗೆ ಅನುಮತಿಸದಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ನಿರ್ದೇಶನ ನೀಡಿದ್ದಾರೆ.