ಜೂ. 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 14. ಬಹುನಿರೀಕ್ಷಿತ ಗೃಹಜ್ಯೋತಿ ಯೋಜನೆಗೆ ಜೂ. 18ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊದಲು ಆಗಸ್ಟ್ 15ರವರೆಗೂ ಪರಿಶೀಲನೆ ನಡೆಸಿ ಬಳಿಕ ಸ್ವಾತಂತ್ರ್ಯ ದಿನಾಚರಣೆಯಂದು ಯೋಜನೆ ಅನುಷ್ಠಾನವನ್ನು ಘೋಷಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಅರ್ಜಿ ಸ್ವೀಕಾರಕ್ಕೆ ಈ ಆಡಳಿತ ವ್ಯವಸ್ಥೆ ಸನ್ನದ್ಧುಗೊಳ್ಳದ ಕಾರಣ ಜೂ. 15ರ ಬದಲು ಜೂ. 18ರಿಂದ ಅರ್ಜಿ ಸ್ವೀಕರಿಸಲು ನಿರ್ಧರಿಸಲಾಗಿದೆ. ಸೇವಾ ಸಿಂಧು ಆ್ಯಪ್‍ನಲ್ಲಿ ಅರ್ಹ ಫಲಾನುಭವಿಗಳು 4ದಿನದ ಬಳಿಕ ನೋಂದಣಿಯನ್ನು ಆರಂಭಿಸಬಹುದು.

ಈವರೆಗೆ ಲಭ್ಯವಾದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2.14 ಕೋಟಿ ಗೃಹ ಸಂಪರ್ಕದಾರರು ಗೃಹಜ್ಯೋತಿ ಯೋಜನೆಗೆ ಅರ್ಹತೆ ಹೊಂದಿದ್ದು ಅಷ್ಟೂ ಜನ ಅರ್ಜಿ ಸಲ್ಲಿಸಲು ಮುಂದಾದರೆ ಸೇವಾ ಸಿಂಧು ಪೋರ್ಟಲ್ ತಾಂತ್ರಿಕ ತೊಂದರೆಗೊಳಬಹುದಾದ ಸಾಧ್ಯತೆ ಇದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಈ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳುತ್ತಿದ್ದು, ಗೃಹಲಕ್ಷ್ಮಿ ಯೋಜನೆಗೆ ಜೂ. 17 ರಿಂದ ನೋಂದಣಿ ಆರಂಭವಾಗುವ ಸಾಧ್ಯತೆ ಇದೆ.

Also Read  ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಪ್ರಕರಣ

error: Content is protected !!
Scroll to Top