ಲಂಡನ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯ ಹತ್ಯೆ

(ನ್ಯೂಸ್ ಕಡಬ) newskadaba.com ಲಂಡನ್, ಜೂ 14. ಲಂಡನ್ ನಗರದ ವೆಂಬ್ಲೆ ಪ್ರದೇಶದಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಹತ್ಯೆಗೈದ ಕುರಿತು ವರದಿಯಾಗಿದೆ.

ಮೃತ ಯುವತಿಯನ್ನು ತೇಜಸ್ವಿನಿ ರೆಡ್ಡಿ ಎಂದು ಗುರುತಿಸಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕೆಂದು ಲಂಡನ್ ಗೆ ತೆರಳಿದ್ದ ಈಕೆಯನ್ನು ಬ್ರೆಝಿಲ್ ಮೂಲದ ವ್ಯಕ್ತಿಯೋರ್ವ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!
Scroll to Top