ತೆಕ್ಕಿಲ್ ಶಾಲಾ ಮಂತ್ರಿಮಂಡಲ ರಚನೆ ➤ ಮುಖ್ಯಮಂತ್ರಿಯಾಗಿ ಆಯಿಷಾ, ಉಪ ಮುಖ್ಯಮಂತ್ರಿಯಾಗಿ ತೌಸೀಫ್ ಆಯ್ಕೆ

(ನ್ಯೂಸ್ ಕಡಬ) newskadaba.com ಗೂನಡ್ಕ, ಜೂ. 14. ಇಲ್ಲಿನ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ರ ಶೈಕ್ಷಣಿಕ ವರ್ಷಕ್ಕೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸಂಪತ್ ಜೆ.ಡಿ ಅವರು ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿ ನಾಯಕಿಯಾಗಿ ಆಯಿಷಾ, ಉಪನಾಯಕನಾಗಿ ತೌಸೀಫ್, ಆರೋಗ್ಯ ಮಂತ್ರಿಯಾಗಿ ಪುಷ್ಯ ಮತ್ತು ನಸ್ವೀಹ್, ನೀರಾವರಿ ಮಂತ್ರಿಯಾಗಿ ನಿಹಾದ್ ಮತ್ತು ಹನ್ಶಿಫಾ, ವಾರ್ತಾ ಮಂತ್ರಿಯಾಗಿ ಮಿಶಾಬ್ ಮತ್ತು ರೈಫಾನ, ಕ್ರೀಡಾ ಮಂತ್ರಿಯಾಗಿ ಫರಾಝ್ ಮತ್ತು ಶಬ್ನಮ್, ಕೃಷಿ ಮಂತ್ರಿಯಾಗಿ ಭುವನ್ ಮತ್ತು ಸಫಾ, ಸಾಂಸ್ಕೃತಿಕ ಮಂತ್ರಿಯಾಗಿ ಹನ್ನತ್ ಮತ್ತು ರುಫೈಸ್, ಆಹಾರ ಮಂತ್ರಿಯಾಗಿ ಶಹಾನ್ ಅಖೀಲ್, ಶಮ್ಮಾಸ್, ಅಸ್ನ ಹಾಗೂ ಶಿಸ್ತು ಮಂತ್ರಿಯಾಗಿ ಅನುಷ್ಕಾ ಮತ್ತು ಮುಝಮ್ಮಿಲ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಉನೈಸ್ ಪೆರಾಜೆ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Also Read  ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ

error: Content is protected !!
Scroll to Top