ಪುತ್ತೂರು: ಮಳೆಗಾಲ ಹಿನ್ನೆಲೆ- ಜೂ. 15ರಿಂದ ನಾಲ್ಕು ತಿಂಗಳ ಕಾಲ ರಸ್ತೆಬದಿ ಮಣ್ಣು ಅಗೆತ ನಿಷೇಧ ➤ ನಗರಸಭೆ ಸೂಚನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 14. ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ ನಗರಸಭೆ ವ್ಯಾಪ್ತಿಯಲ್ಲಿ ಟೆಲಿಪೋನ್/ವಿದ್ಯುತ್ ಕೇಬಲ್/ಕುಡಿಯುವ ನೀರು ಕೊಳವೆ ಸೇರಿದಂತೆ ಇನ್ನಿತರ ರಸ್ತೆ ಅಗೆತ ಮಾಡುವುದನ್ನು ಜೂ.15 ರಿಂದ ನಿಷೇಧಿಸಲಾಗಿದೆ. ಮಳೆಗಾಲದಲ್ಲಿ ರಸ್ತೆ ಬದಿ ಅಗೆಯುವುದರಿಂದ ಮಣ್ಣು ಸಡಿಲವಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇದರಿಂದಾಗಿ ಜೂ. 15ರಿಂದ ಸೆ. 30ರ ವರೆಗೆ ರಸ್ತೆ ಅಗೆತ ನಿಷೇಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸೂಚನೆ ನೀಡಿದ್ದಾರೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.

Also Read  ಕಲ್ಲಡ್ಕ: ಅಕ್ರಮ ಗಾಂಜಾ ಸಾಗಾಟ ಪತ್ತೆ ► ಎರಡು ಕೆಜಿ ಗಾಂಜಾ ಸಹಿತ ಆರೋಪಿಯ ಬಂಧನ

 

error: Content is protected !!
Scroll to Top