ನೆಲ್ಯಾಡಿ: ಉ.ಪ್ರ. ಮೂಲದ ಕೂಲಿ ಕಾರ್ಮಿಕನಿಗೆ ಹಲ್ಲೆ- ಆರೋಪ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 14. ದಾರಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ತಂಡವೊಂದು ಹಲ್ಲೆ ನಡೆಸಿದೆ ಎಂದು ಮಾತು ಬಾರದ ಕಾರ್ಮಿಕರೋರ್ವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಕುರಿತು ವರದಿಯಾಗಿದೆ.

ಹಲ್ಲೆಗೊಳಗಾದವರನ್ನು ಉತ್ತರ ಪ್ರದೇಶ ಮೂಲದ ಲಡ್ಡು(34) ಎಂದು ಗುರುತಿಸಲಾಗಿದೆ. ಅವರು ಕಿವಿ ಕೇಳಿಸದ ಹಾಗೂ ಮಾತು ಬರದವರಾಗಿದ್ದರಿಂದ ಘಟನೆಯನ್ನು ಹಿಂದಿಯಲ್ಲಿ ಬರೆದು ತೋರಿಸಿದ್ದಾರೆ. ಅದರಲ್ಲಿ ನಾನು ಸುಮಾರು 10 ವರ್ಷಗಳಿಂದ ನೆಲ್ಯಾಡಿ ವಿ ಜೆ ಜೋಸೆಪ್ ಅವರ ಮಾಲಕತ್ವದ ನಯನ ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಜೂ. 13ರಂದು ಕೆಲಸ ಮುಗಿಸಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಮೋಹನ್, ಸದಾನಂದ್, ಶಿವಾನಂದ್, ವಾರಿಜ, ಪ್ರಕಾಶ್, ಉಮೇಶ್, ಮಂಜುಳ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Also Read  ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಲೆಗೈದ ಪಾಪಿ ➤ ಮೃತದೇಹವನ್ನು ಸುಡಲೆತ್ನಿಸಿದ ಆರೋಪಿಯ ಬಂಧನ

error: Content is protected !!
Scroll to Top