ಕೆಎಂಎಫ್ ನೊಂದಿಗೆ ಅಮುಲ್ ವಿಲೀನವಿಲ್ಲ ➤ ಸಚಿವ ಕೆ.ಎನ್.ರಾಜಣ್ಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 14. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕೆಎಂಎಫ್ ಮತ್ತು ಅಮುಲ್ ವಿಲೀನಗೊಳಿಸುವ ಪ್ರಸ್ತಾಪ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳನ್ನು ಪರಸ್ಪರ ವಿಲೀನಗೊಳಿಸುವುದು ಅಸಾಧ್ಯದ ಕೆಲಸ. ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಈ ವಿಲೀನದ ಪರವಾಗಿರದೇ ಕೆಎಂಎಫ್ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ರೈತರಿಗೆ ಶಕ್ತಿ ನೀಡುವುದು ನಮ್ಮ ಉದ್ದೇಶ ಎಂದರು. ಇನ್ನೂ ರೈತರಿಗೆ ಪಾವತಿಸಬೇಕಿರುವ ಪ್ರೋತ್ಸಾಹಧನ ಬಾಕಿಯಿದ್ದು, ಶೀಘ್ರವಾಗಿ ಈ ಬಾಕಿಯನ್ನು ನೀಡುತ್ತೇವೆ ಎಂದು ಸಚಿವರು ಆಶ್ವಾಸನೆ ನೀಡಿದರು.

Also Read  ಕೆಎಂಎಫ್ ನಿಂದ ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರವೇ ನಂದಿನಿ ಇಡ್ಲಿ ದೋಸೆ ಹಿಟ್ಟು ಮಾರುಕಟ್ಟೆಗೆ

error: Content is protected !!
Scroll to Top