ವರ್ಕ್ ಫ್ರಂ ಹೋಂ ರದ್ದುಗೊಳಿಸಿದ ಟಾಟಾ ➤ ಮಹಿಳಾ ಉದ್ಯೋಗಿಗಳಿಂದ ಸಾಮೂಹಿಕ ರಾಜೀನಾಮೆ

(ನ್ಯೂಸ್ ಕಡಬ) newskadaba.com  ವದೆಹಲಿ, ಜೂ. 13.  ಜಗತ್ತಿನಾದ್ಯಂತ ಕೋವಿಡ್‌ 19 ಸೋಂಕು ಬಾಧಿಸಿದ ಮೂರು ವರ್ಷಗಳ ಬಳಿಕ ಭಾರತದ ಅತೀ ದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಕಂಪನಿಯು ವರ್ಕ್‌ ಫ್ರಂ ಹೋಮ್‌ ಅನ್ನು ರದ್ದುಗೊಳಿಸಿದ್ದು, ಇದರ ಪರಿಣಾಮ ಮಹಿಳಾ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿರುವ ಘಟನೆ ಹೆಚ್ಚಳವಾಗಿದೆ.

ಟಿಸಿಎಸ್ ಕಂಪನಿಯು ಯಾವುದೇ ಲಿಂಗತಾರತಮ್ಯವಿಲ್ಲದೇ ಮಹಿಳೆಯರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಕಲ್ಪಿಸಿತ್ತು, ಆದರೆ ಇದೀಗ ಕಂಪನಿಯು ವರ್ಕ್‌ ಫ್ರಂ ಹೋಮ್‌ ನಿಯಮವನ್ನು ರದ್ದುಗೊಳಿಸಿದ ಹಿನ್ನೆಲೆ ಮಹಿಳಾ ಉದ್ಯೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ರಾಜೀನಾಮೆ ಕೊಡಲು ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ. ಟಿಸಿಎಸ್‌ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್‌ ಲಕ್ಕಡ್‌ ಅವರ ಮಾಹಿತಿ ಪ್ರಕಾರ, ವರ್ಕ್‌ ಫ್ರಂ ಹೋಮ್‌ ಅವಕಾಶವನ್ನು ನಿಲ್ಲಿಸಿದ ನಂತರ ಮಹಿಳಾ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Also Read  ಬಂಟ್ವಾಳ: ಡಿ.28 ರಿಂದ ಫೆ.17 ರವರೆಗೆ ಸಾರ್ವಜನಿಕರಿಗಿಲ್ಲ ಪೊಳಲಿಯ ದೇವರ ದರ್ಶನ

error: Content is protected !!
Scroll to Top