ಪುತ್ತೂರು: ಕುಸಿದು ಬಿದ್ದು ಮೆಸ್ಕಾಂ ಪವರ್ ಮ್ಯಾನ್ ಮೃತ್ಯು ➤ ಮೃತರ ಮನೆಗೆ ಭೇಟಿ ನೀಡಿದ ಸಾಂತ್ವನ ಹೇಳಿದ ಶಾಸಕ ಅಶೋಕ್ ರೈ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 13. ಅನಾರೋಗ್ಯದಿಂದಿದ್ದ ಮೆಸ್ಕಾಂ ಪವರ್‌ ಮ್ಯಾನ್ ಓರ್ವರು ಮನೆಯೊಳಗೆ ಕುಸಿದು ಬಿದ್ದು ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ವರದಿಯಾಗಿದೆ.


ಮೃತರನ್ನು ಕುರಿಯ ಗ್ರಾಮದ ಇಡಬೆಟ್ಟು ಕುಂಡಕೋರಿ ನಿವಾಸಿ ಕುಂಡಮೇರ ಎಂಬವರ ಪುತ್ರ ಕುಂಬ್ರದಲ್ಲಿ ಮೆಸ್ಕಾಂ ಪವರ್‌ಮ್ಯಾನ್ ಆಗಿ ಕರ್ತವ್ಯದಲ್ಲಿರುವ ಉಮೇಶ್ ಕುಂಡಕೋರಿ (42) ಎಂದು ಗುರುತಿಸಲಾಗಿದೆ. ಇವರು ಕೆಲದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಜೂ. 12ರಂದು ರಾತ್ರಿ ಮನೆಯೊಳಗೆ ಕುಸಿದು ಬಿದ್ದು, ಇವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಘಟನೆಯ ವಿಷಯ ತಿಳಿದ ಶಾಸಕ ಅಶೋಕ್ ರೈ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬದ ಆಧಾರವಾಗಿದ್ದ ಉಮೇಶ್ ರವರ ಸಾವಿನಿಂದ ಕುಟುಂಬ ಕಂಗಾಲಾಗಿದ್ದು ಮಾನವೀಯ ನೆಲೆಯಲ್ಲಿ ಪುತ್ರನಿಗೆ ಮೆಸ್ಕಾಂ ನಲ್ಲಿ ಉದ್ಯೋಗ ಕೊಡಿಸಲು ಅವಕಾಶವಿದ್ದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು.

Also Read  ಉಚಿತ ಆಯುಷ್ ಚಿಕಿತ್ಸಾ ಶಿಬಿರ ಕಾರ್ಯಕ್ರಮ

error: Content is protected !!
Scroll to Top