ವಿದ್ಯುತ್ ದರ ಏರಿಕೆಯನ್ನು ನಮ್ಮ ಸರಕಾರ ಒಪ್ಪಿರಲಿಲ್ಲ ➤ ಬೊಮ್ಮಾಯಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಜೂ. 13. ಬಿಜೆಪಿ ಸರಕಾರ ವಿದ್ಯುತ್ ದರ ಏರಿಕೆಯ ಪ್ರಸ್ತಾಪವನ್ನು ಒಪ್ಪಿರಲಿಲ್ಲ‌. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಏರಿಕೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ನಾವು ಇದನ್ನು ಒಪ್ಪಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಿದ್ಯುತ್ ದರ ಏರಿಕೆಗೆ ಒಪ್ಪಿಗೆ ನೀಡಿದೆ ಎಂದರು.

Also Read  5 ಅಡಿ ಆಳದ ಗುಂಡಿಗೆ ಬಿದ್ದ ಬೈಕ್ ► ಇಬ್ಬರು ಫೋಟೋಗ್ರಾಫರ್ ಗೆ ಗಾಯ..!!!

error: Content is protected !!
Scroll to Top