ಹೆಚ್ಚು ಹಣ ಕೇಳಿದ್ದಕ್ಕೆ ಜಗಳ ➤ ಆಟೋ ಚಾಲಕನಿಂದ ಪ್ರಯಾಣಿಕನ ಕೊಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 13. ಕೆಲಸ ಮುಗಿಸಿಕೊಂಡು ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಬಳಿ ಹೆಚ್ಚಿನ ಹಣ ಕೇಳಿದ ಚಾಲಕನೊಂದಿಗೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಅಸ್ಸಾಂ ಮೂಲದ ಅಹ್ಮದ್ (28) ಮತ್ತು ಗಾಯಗೊಂಡಿರುವ ಯುವಕನನ್ನು ಅಯೂಬ್ (26) ಎಂದು ಗುರುತಿಸಲಾಗಿದೆ. ಪ್ರಯಾಣಿಕರು ಮತ್ತು ಚಾಲಕನ ನಡುವೆ ಹಣದ ವಿಷಯಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರು ಪ್ರಯಾಣಿಕರಿಗೆ ಆಟೋ ಚಾಲಕ ಚಾಕುವಿನಿಂದ ಇರಿದಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ. ಘಟನೆಯ ಬಳಿಕ ಆಟೊರಿಕ್ಷಾ ಚಾಲಕ ಅಶ್ವಥ್ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Also Read  ಸೇತುವೆಯಿಂದ ಉರುಳಿಬಿದ್ದ ಲಾರಿ ➤ ಓರ್ವ ಮೃತ್ಯು..!

error: Content is protected !!
Scroll to Top