ಚಂದ್ರಯಾನ-3ರ ಉಡಾವಣೆಗೆ ದಿನಾಂಕ ಫಿಕ್ಸ್..!

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 13. ಚಂದ್ರಯಾನ-3ರ ಎಲ್ಲಾ ಪರೀಕ್ಷೆಗಳು ಉತ್ತಮವಾಗಿ ಯೋಜಿಸಿದಂತೆ ನಡೆದರೆ ಜುಲೈ 12 ಹಾಗೂ 19ರ ನಡುವೆ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಹೇಳಿದ್ದಾರೆ.

ಈ ಬಗ್ಗೆ ತಿರುವನಂತಪುರದಲ್ಲಿ ಮಾತನಾಡಿದ ಅವರು, ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3 ಲಾಂಚ್‌ಗೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ಅಂತಿಮ ಸಿದ್ಧತೆಗಳು ನಡೆಯುತ್ತಿದೆ. ಈ ಉಡಾವಣೆಗೆ LVM-3 ರಾಕೆಟ್‌ ಬಳಸಲಾಗುತ್ತಿದ್ದು, ಅದರ ಜೋಡಣಾ ಕಾರ್ಯವೂ ನಡೆಯುತ್ತಿದ. ಇದಕ್ಕಾಗಿ ಎಲ್ಲ ಭಾಗಗಳು ಶ್ರೀಹರಿಕೋಟಾ ತಲುಪಿವೆ ಎಂದರು.

Also Read  ಚಂದ್ರಯಾನ-3 ಯಶಸ್ಸಿಗೆ ದೇಶ- ವಿದೇಶಗಳಲ್ಲಿ ವಿಶೇಷ ಪ್ರಾರ್ಥನೆ

error: Content is protected !!
Scroll to Top