ದ.ಕ/ಉಡುಪಿ: ಉಚಿತ  ಬಸ್ ಪ್ರಯಾಣ ➤ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತುಂಬಿದ ಮಹಿಳಾ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಮಂಗಳೂರು/ಉಡುಪಿ, ಜೂ. 13. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಹಿನ್ನೆಲೆ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ಮಹಿಳಾ ಪ್ರಯಾಣಿಕರು ಮುಗಿಬಿದ್ದಿದ್ದು, ನಗರದಿಂದ ಹೊರವಲಯಕ್ಕೆ ತೆರಳುವ ಬಸ್‌ಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಂದ ತುಂಬಿದ್ದರು.

ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಜೆಯ ವೇಳೆ ಜ್ಯೋತಿ ಸಿನಿಮಾ ಥಿಯೇಟರ್‌ ತಲುಪುವಷ್ಟರಲ್ಲಿ ಭರ್ತಿಯಾಗಿದ್ದವು. ಉಡುಪಿ, ಮೂಡುಬಿದಿರೆ, ಕಾರ್ಕಳ, ಕುಂದಾಪುರ ಭಾಗದಲ್ಲಿ ಬಸ್‌ ಹತ್ತಲು ಸಾಧ್ಯವಾಗದೇ ಹಲವು ಮಹಿಳೆಯರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿದೆ. ಇನ್ನು ಉಡುಪಿ ಡಿಪೋದಲ್ಲಿ 940 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಉಚಿತ ಪ್ರಯಾಣದ ಬಳಿಕ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರೂ ಕೂಡಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದಾರೆ.

Also Read  ದ.ಕ ಜಿಲ್ಲಾಡಳಿತವು ವಿವಿಧ ಸಂಘ-ಸಂಸ್ಥೆ, ಮತ್ತು ಎನ್ ಜಿ ಒ ಗಳ ಸಹಯೋಗದಲ್ಲಿ ➤ ‘ಡೆಂಗ್ಯೂ ಡ್ರೈವ್ ಡೇ’ ಅಭಿಯಾನ ಕಾರ್ಯಕ್ರಮ

error: Content is protected !!
Scroll to Top