ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ಕೇಸ್ ನಲ್ಲಿಟ್ಟು ಠಾಣೆಗೆ ತಂದ ಪುತ್ರಿ ➤ ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 13. ಪುತ್ರಿಯೋರ್ವಳು ಹೆತ್ತ ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ ಕೇಸ್ ನಲ್ಲಿಟ್ಟು ಠಾಣೆಗೆ ತಂದ ಭೀಕರ ಘಟನೆಯ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಹತ್ಯೆಗೊಳಗಾದವರನ್ನು ಬೀವಾ ಪಾಲ್ (70) ಎಂದು ಗುರುತಿಸಲಾಗಿದೆ. ಇವರು ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಳೇಕಹಳ್ಳಿಯ ಎಂಎಸ್ ಆರ್ ಅಪಾರ್ಟ್ ಮೆಂಟ್ ನಲ್ಲಿ ಮಗಳು ಸೆನಾಲಿ ಸೇನ್‌, ಹಾಗೂ ಸೆನಾಲಿ ಅತ್ತೆ ವಾಸವಾಗಿದ್ದರು. ದಿನನಿತ್ಯವೂ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ನಡುವೆ ಜಗಳವಾಗುತ್ತಿತ್ತು. ಇದನ್ನು ಕಂಡು ಸೆನಾಲಿ ಸೇನ್‌ ಬೇಸತ್ತು ಹೋಗಿದ್ದಳು. ಈ ವಿಚಾರವಾಗಿ ತಾಯಿ ಬೀವಾಪಲ್ ಗೆ ಸೋನಾಲಿ 20 ನಿದ್ದೆ ಮಾತ್ರೆ ನುಂಗಿಸಿ, ಬಳಿಕ ಕುತ್ತಿಗೆಗೆ ವೇಲ್ ಬಿಗಿದು ಹತ್ಯೆ ಮಾಡಿದ್ದಾಳೆ. ನಂತರ ತಾಯಿ ಬೀವಾ ಪಾಲ್ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು, ಅದರೊಂದಿಗೆ ತಂದೆಯ ಪೊಟೋವನ್ನು ಇಟ್ಟು ಸೆನಾಲಿ ಮೈಕೋಲೇಔಟ್‌ ಠಾಣೆಗೆ ಆಗಮಿಸಿದ್ದಾಳೆ. ಮಗಳು ಸೆನಾಲಿಯ ಕೃತ್ಯ ಕಂಡು ಮೈಕೋಲೇಔಟ್ ಪೊಲೀಸರು ಬೆಚ್ಚಿಬಿದ್ದಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಸೆನಾಲಿ ಸೇನ್‌ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Also Read  ಪಾದಚಾರಿಗಳಿಗೆ ಬೈಕ್ ಢಿಕ್ಕಿ ನಾಲ್ವರು ಮೃತ್ಯು- ಮೂವರಿಗೆ ಗಂಭೀರ ಗಾಯ..!

error: Content is protected !!
Scroll to Top