ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶೌಚಾಲಯದ ಗುಂಡಿ ನಿರ್ಮಾಣ

(ನ್ಯೂಸ್ ಕಡಬ) newskadaba.com ಪೆರ್ನೆ, ಜೂ. 12. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ) ವಿಟ್ಲ, ಪೆರ್ನೆ ವಲಯದ ಶ್ರೀಮತಿ ರೇವತಿ ಪೂಜಾರಿ ಉರಿಮಾಡ (ಮೈರಕಟ್ಟೆ) ಎಂಬವರ ಗಂಡ ಮರಣ ಹೊಂದಿದ್ದು, ಅವರಿಗೆ ಸಣ್ಣ ಮಗ ಮಾತ್ರ ಇದ್ದು, ಅವರ ಮನೆ ಬೀಳುವ ಹಂತಕ್ಕೆ ಬಂದಿದೆ. ಹೀಗಾಗಿ ಪಂಚಾಯತ್ ನಿಂದ ಹೊಸ ಮನೆಗೆ ಮಂಜೂರಾಗಿದ್ದು ಮತ್ತು ಅವರಿಗೆ ಇಲ್ಲಿಯ ತನಕ ಶೌಚಾಲಯ ಇರಲಿಲ್ಲ ಮತ್ತು ಅವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಇದನ್ನು ತಿಳಿದ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸುರೇಶ, ಗೋಪಾಲ, ರಮೇಶ, ಕೇಶವ, ಜಗದೀಶ, ಶೀನಪ್ಪ, ಗಿರೀಶ ಹಾಗೂ ವೆಂಕಪ್ಪ ಸೇರಿ ರೇವತಿಯವರ ಹೊಸ ಶೌಚಾಲಯದ ಗುಂಡಿಯನ್ನು ತೆಗೆದುಕೊಟ್ಟರು.

Also Read  ಬೆಳ್ತಂಗಡಿ: ಅಕ್ರಮ ಗಾಂಜಾ ಸಾಗಾಟ ► ಆರೋಪಿಗಳಿಬ್ಬರ ಬಂಧನ

error: Content is protected !!
Scroll to Top