ಮಂಗಳೂರು: ಮೆಥಾಂಪೆಟಾಮೈನ್ ಮಾದಕ ದ್ರವ್ಯ ಮಾರಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 12. ಅಕ್ರಮವಾಗಿ ಮೆಥಾಂಪೆಟಾಮೈನ್ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.

ಬಂಧಿತರನ್ನು ಕೆ.ಸಿ ರೋಡ್ ತಲಪಾಡಿ ನಿವಾಸಿಯಾಗಿರುವ ಅಬ್ಬುಲ್ ರಶೀದ್ ಮೊಯ್ದೀನ್ (41) ಹಾಗೂ ದೇರಳಕಟ್ಟೆಯ ಪಿ. ಆರೀಫ್ (40) ಎಂದು ಗುರುತಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ಪಿ.ಎಸ್.ಐ ಅಶೋಕ್ ರವರಿಗೆ ನೆತ್ತಿಲಪದವು ಸೈಟ್ ಕಂಬಳ ನಡೆಸುವ ಜಾಗದ ಬಳಿ ಅಕ್ರಮವಾಗಿ ಮೆಥಾಂಪೆಟಾಮೈನ್ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕೇಳಿಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ಪೊಲೀಸರಿಗೆ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಂದ 20 ಗ್ರಾಂ. ಮೆಥಾಂಪೆಟಾಮೈನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಟ್ಟು 1,06,500 ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ➤ ಸುಳ್ಯ ಜುವೆಲರ್ಸ್ ಮಾಲಕನ ಅಪಹರಣ ಯತ್ನ!

error: Content is protected !!
Scroll to Top