ಸುಳ್ಯ ತಾ.ಪಂ. ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯರವರ ಕಛೇರಿ ಕಾರ್ಯಾರಂಭ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 12. ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿಯು ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಸೋಮವಾರದಂದು ಕಾರ್ಯಾರಂಭಗೊಂಡಿತು. ಇದರ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಗಣಹೋಮ ನಡೆಯಿತು. ಬಳಿಕ ಹಿರಿಯರು ಹಾಗೂ ಪ್ರಮುಖರು ದೀಪ ಬೆಳಗಿಸಿ ಕಚೇರಿ ಕಾರ್ಯಾರಂಭ ಮಾಡಿದರು.

ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ರೈ ಮೇನಾಲ, ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ಪಿ.ಕೆ.ಉಮೇಶ್, ಎನ್.ಎ.ರಾಮಚಂದ್ರ, ಕೃಷ್ಣ ಶೆಟ್ಟಿ ಕಡಬ, ವಿನಯಕುಮಾರ್ ಕಂದಡ್ಕ, ಗುರುದತ್ ನಾಯಕ್, ಸಂತೋಷ್ ಜಾಕೆ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಮಹೇಶ್ ಕುಮಾರ್ ರೈ ಮೇನಾಲ, ಸುನಿಲ್ ಕೇರ್ಪಳ, ಪಕ್ಷದ ಪ್ರಮುಖರು, ಬೂತ್ ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರ, ಮಂಡಲ, ಜಿಲ್ಲಾ, ರಾಜ್ಯ ಮಟ್ಟದ ಜವಾಬ್ದಾರಿಯ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸುಬೋದ್ ರೈ ಮೇನಾಲ ಸ್ವಾಗತಿಸಿ, ರಾಕೇಶ್ ರೈ ಕೆಡೆಂಜಿ ವಂದಿಸಿದರು.

Also Read  ಮಂಗಳೂರು: ಬೈಕ್ ಅಪಘಾತ; ಯುವಕ ಮೃತ್ಯು

error: Content is protected !!
Scroll to Top