ಶರದ್ ಪವಾರ್ ಗೆ ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಐಟಿ ಕಂಪನಿ ಉದ್ಯೋಗಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 12. ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪುಣೆಯ ಐಟಿ ಕಂಪನಿ ಉದ್ಯೋಗಿಯೋರ್ವನನ್ನು ಮುಂಬೈ ಕ್ರೈಂ ಬಾಂಚ್, ಪುಣೆಯಲ್ಲಿ ಬಂಧಿಸಿದ ಕುರಿತು ವರದಿಯಾಗಿದೆ.

ಬಂಧಿತನನ್ನು ಸಾಗರ್ ಬರ್ವೆ(34) ಎಂದು ಗುರುತಿಸಲಾಗಿದೆ. ಈತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೊಲೆ ಬೆದರಿಕೆಗಳನ್ನು ಕಳುಹಿಸಲು ಎರಡು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸಿ, ವಾಟ್ಸಾಪ್ ಮೂಲಕ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರ ಮೊಬೈಲ್ ಗೆ ಬೆದರಿಕೆ ಸಂದೇಶ ಕಳುಹಿಸಿದ್ದ. ಈ ಕುರಿತು ಮುಂಬೈ ಪೊಲೀಸರಿಗೆ ಸುಪ್ರಿಯಾ ಸುಳೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಉಪ್ಪಿನಂಗಡಿ: ಆ್ಯಸಿಡ್ ಎರಚಿ ಪರಾರಿಯಾದಾತ ಪೊಲೀಸ್ ಬಲೆಗೆ..‼️ ➤ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಆರೋಪಿ ಅಂದರ್

error: Content is protected !!
Scroll to Top