ಮಂಗಳೂರು: ಜುಗಾರಿ ಅಡ್ಡೆಗೆ ದಾಳಿ ➤ ಲಾಡ್ಜ್ ಸಿಬ್ಬಂದಿ ಸಹಿತ 7 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜೂ. 12. ಲಾಡ್ಜ್ ನ ರೂಂ ಒಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ 7 ಮಂದಿ ಹಾಗೂ ಆಡಲು ಅವಕಾಶ ಮಾಡಿಕೊಟ್ಟ ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ ಘಟನೆ ಮುಕ್ಕ ಚೆಕ್ ಪೋಸ್ಟ್ ಬಳಿ ನಡೆದಿದೆ‌.

ಬಂಧಿತ ಆರೋಪಿಗಳನ್ನು ಲಾಲ್ ಸಾಬ್ (31), ಅಮೀರ್ ಘಣಿಸಾಬ್ (31), ದಸ್ತಗಿರ್ ಸಾಬ್ (32), ಸಿದ್ದಣ್ಣ (47 ) ಮುಹಮ್ಮದ್ ರಫೀಕ್ (34), ಪರಶುರಾಮ (29), ಜಿತೇಂದ್ರ ಹೀರಾಸಿಂಗ್ (34) ಹಾಗೂ ಜೂಜು ಆಡಲು ಸ್ಥಳ ನೀಡಿದ್ದ ಲಾಡ್ಜ್ ಮ್ಯಾನೇಜರ್ ಪಡುಬಿದ್ರೆ ಪಲಿಮಾರು ನಿವಾಸಿ ಬಾಬು ಚಂದ್ರಶೇಖರ್ (62) ಹಾಗೂ ಸಿಬ್ಬಂದಿ ಹೆಜಮಾಡಿ ಕೊಡಿ ನಿವಾಸಿ ರಕ್ಷಿತ್ (23) ರನ್ನು ಪೊಲೀಸರು ಬಂಧಿಸಿದ್ದಾರೆ‌. ಆರೋಪಿಗಳಿಂದ ಆಟದಲ್ಲಿ ಪಣಕ್ಕೆ ಇಟ್ಟಿದ್ದ 26,020 ರೂ. ನಗದು, 9 ಮೊಬೈಲ್ ಫೋನ್ ಗಳು, 1 ಎರ್ಟಿಗಾ ಕಾರು ಮತ್ತು ಆಡಲು ಉಪಯೋಗಿಸಿದ್ದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮುಕ್ಕ ಚೆಕ್ ಪೋಸ್ಟ್ ನಲ್ಲಿರುವ ಲಾಡ್ಜ್ ನಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿರುವ ಕುರಿತು ಖಚಿತ ಮಾಹಿತಿಯಂತೆ ಸುರತ್ಕಲ್ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Also Read  ಸುಳ್ಯ: KSRTC ಬಸ್ ಡಿಪೋದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

error: Content is protected !!
Scroll to Top