ಇಲಿ ಪಾಷಾಣ ಸವರಿಟ್ಟಿದ್ದ ಹಣ್ಣು ತಿಂದು ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ದಾವಣಗೆರೆ, ಜೂ. 10. ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟಿದ್ದ ಹಣ್ಣೊಂದು ಆಕಸ್ಮಿಕವಾಗಿ ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.

ಮೃತ ಯುವತಿಯನ್ನು ಎಚ್.ಐಶ್ವರ್ಯಾ (21) ಎಂದು ಗುರುತಿಸಲಾಗಿದೆ. ಐಶ್ವರ್ಯಾಳ ಮನೆಯಲ್ಲಿ ಇಲಿಗಳ ಕಾಟ ವಿಪರೀತವಾಗಿದ್ದರಿಂದ ಅವುಗಳನ್ನು ಸಾಯಿಸುವ ಉದ್ದೇಶದಿಂದ ಮನೆಯವರು ಹಣ್ಣೊಂದಕ್ಕೆ ಇಲಿ ಪಾಷಾಣ ಸವರಿ ಇಟ್ಟಿದ್ದು, ಇದನ್ನು ತಿಳಿಯದ ಐಶ್ವರ್ಯಾ ಅದನ್ನು ತಿಂದಿದ್ದಾರೆ ಎನ್ನಲಾಗಿದೆ. ಹಣ್ಣು ತಿಂದ ಕೂಡಲೇ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಐಶ್ವರ್ಯಾರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top