ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ ➤ ಉ.ಪ್ರದೇಶದ ಕಾರ್ಮಿಕನ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 10. ಕೆಲಸದಿಂದ ಹಿಂತಿರುಗುತ್ತಿದ್ದ ಯುವತಿ ಮೇಲೆ ಹೊರರಾಜ್ಯದ ಕಾರ್ಮಿಕನೋರ್ವ ಮಾನಭಂಗಕ್ಕೆ ಯತ್ನಿಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ತಲಪಾಡಿಯಲ್ಲಿ ಸಂಭವಿಸಿದೆ.

ಆರೋಪಿಯನ್ನು ಉತ್ತರಪ್ರದೇಶ ಮೂಲದ ರಾಮು ಕೆ. ಎಂದು ಗುರುತಿಸಲಾಗಿದೆ. ಯುವತಿಯೋರ್ವಳು ಮಂಗಳೂರಿಗೆ ಕೆಲಸಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ದಾರಿಮಧ್ಯೆ ಆರೋಪಿಯು ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಘಟನೆಯಿಂದ ಹೆದರಿದ ಯುವತಿ ಬೊಬ್ಬಿಟ್ಟಾಗ ಸ್ಥಳೀಯರು ಓಡಿಬಂದು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಹಿಡಿದು ಬಂಧಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಾಲಕನ ಅಪಹರಣ ಪ್ರಕರಣ ➤ ಜಿಲ್ಲಾ ಎಸ್ಪಿ ನೇತೃತ್ವದ ಪೊಲೀಸ್ ತಂಡಕ್ಕೆ ಅಭಿನಂದನೆ

error: Content is protected !!
Scroll to Top