ಸರಕಾರಿ ಹುದ್ದೆ ಕೊಡಿಸುವುದಾಗಿ ವಂಚನೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಣಿಪಾಲ, ಜೂ. 10. ವಿಧಾನಸೌಧದಲ್ಲಿ ಸರ್ಕಾರಿ ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೋರ್ವರಿಂದ ಹಣ ಪಡೆದು ವಂಚಿಸಿದ ಘಟನೆ ವರದಿಯಾಗಿದೆ.

ಕುಂಜಿಬೆಟ್ಟು ಮನೋಳಿಗುಜ್ಜಿ ನಿವಾಸಿ ನವೀನ್ ರಾವ್ ಎಂಬವರಿಗೆ ಬಾಸ್ಕರ್ ಭಟ್ ಎಂಬಾತ ವಿಧಾನಸೌಧದಲ್ಲಿ ಸರ್ಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ 40 ಸಾವಿರ ರೂ. ನಗದು ಪಡೆದು ಫೆ. 20ರ ಒಳಗೆ ಉದ್ಯೋಗದ ಆದೇಶ ಬರುವುದಾಗಿ ಹೇಳಿದ್ದು, ಇದುವರೆಗೂ ಯಾವುದೇ ನೇಮಕಾತಿ ಆದೇಶವು ಬಾರದೆ ವಂಚಿಸಿದ್ದಾರೆ. ಇದೀಗ ನೀಡಿದ ಹಣವನ್ನು ವಾಪಾಸು ಕೊಡಲು ಹೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.

Also Read  ಬೆಂಗಳೂರು: ವಿಮಾನ ನಿಲ್ದಾಣದಲ್ಲಿ 2.5 ಕೆಜಿ ಚಿನ್ನ ಕಳ್ಳ ಸಾಗಣೆ        ಆರೋಪಿಗಳಿಬ್ಬರು ಅರೆಸ್ಟ್     

error: Content is protected !!
Scroll to Top