ವಿಮಾನದಲ್ಲಿ ಕುಳಿತು ಫೋನ್ ಸಂಭಾಷಣೆಯಲ್ಲಿ ‘ಬಾಂಬ್’ ಬಗ್ಗೆ ಚರ್ಚೆ ➤ ವ್ಯಕ್ತಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜೂ. 09. ಫೋನ್ ಸಂಭಾಷಣೆ ಮೂಲಕ ಬಾಂಬ್ ಬಗ್ಗೆ ಮಾತನಾಡಿದ್ದಕ್ಕೆ ದೆಹಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿದ ಕುರಿತು ವರದಿಯಾಗಿದೆ.

ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿ ಅಝೀಂ ಖಾನ್ ಎಂಬಾತ ವಿಸ್ತಾರಾ ವಿಮಾನ ಸಂಖ್ಯೆ ಯುಕೆ-941 ರಲ್ಲಿ ದುಬೈಗೆ ಪ್ರಯಾಣಿಸುತ್ತಿದ್ದು, ಫೋನಿನ ಮೂಲಕ ಬಾಂಬ್ ಕುರಿತು ಮಾತನಾಡುತ್ತಿದ್ದನು. ಇದನ್ನು ಕೇಳಿಸಿಕೊಂಡ ಮಹಿಳೆಯೊಬ್ಬರು ತಕ್ಷಣ ವಿಮಾನದಲ್ಲಿದ್ದ ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸಿಬ್ಬಂದಿಗಳು ವ್ಯಕ್ತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಹಸ್ತಾಂತರಿಸಿದರು, ನಂತರ ದಿಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Also Read  ಗೃಹ ಸಚಿವರ ಹೆಸರಲ್ಲಿ ಡ್ಯಾನ್ಸ್ ಬಾರ್ ಗಳಿಗೆ ಪರವಾನಿಗೆ ಕೊಡಿಸುವುದಾಗಿ ವಂಚನೆ ➤ ಆರೋಪಿ ಸಿಸಿಬಿ ವಶಕ್ಕೆ

error: Content is protected !!
Scroll to Top