ಹಳೆ ಸಾಮಗ್ರಿಗಳನ್ನು ಕದ್ದು ಸಾಗಾಟ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 09. ಹಳೆ ಸಾಮಗ್ರಿಗಳನ್ನು ಕಳವುಗೈದು ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಕಪ್ ವ್ಯಾನ್ ಚಾಲಕನೋರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.

ಬಂಧಿತನನ್ನು ತಲಪಾಡಿ ಕೆ .ಸಿ ರೋಡ್ ನ ಅಶ್ರಫ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಬಂದ್ಯೋಡು ಪೇಟೆಯಲ್ಲಿನ ಅಂಗಡಿಯೊಂದನ್ನು ತೆರವುಗೊಳಿಸಲಾಗಿದ್ದು, ಈ ಅಂಗಡಿಯ ಶಟರ್ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಪಿಕಪ್ ವ್ಯಾನ್ ನಲ್ಲಿ ತುಂಬಿಸಿ ಸಾಗಾಟ ಮಾಡಿದ್ದು, ಇದರಿಂದ ಸಂಶಯಗೊಂಡ ಪರಿಸರದವರು ಮಾಲಕನಿಗೆ ಮಾಹಿತಿ ನೀಡಿದ್ದರು. ಇನ್ನು ಸ್ಥಳಕ್ಕೆ ಆಗಮಿಸಿದ ಮಾಲಕ ಮುಹಮ್ಮದ್ ರಿಯಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಶ್ರಫ್ ನನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ರಿಯಾಜ್ ತಪ್ಪಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಕಾಸರಗೋಡು: ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದು ಕಾರ್ಮಿಕ ಮೃತ್ಯು

error: Content is protected !!
Scroll to Top