(ನ್ಯೂಸ್ ಕಡಬ) newskadaba.com ಮುಂಬೈ, ಜೂ. 08. ಕಚ್ಚಾತೈಲ ಬೆಲೆ ಇಳಿಕೆ ಹಾಗೂ ತೈಲ ಕಂಪನಿಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತೈಲ ರಪ್ತು ಮಾಡುತ್ತಿದ್ದ ಒಪೆಕ್ ರಾಷ್ಟ್ರಗಳಿಂದ ಆಮದು ಕ್ಷೀಣಿಸಿದ್ದರಿಂದ ಇದೀಗ ರಷ್ಯಾದಿಂದ ಹೆಚ್ಚಿನ ಕಚ್ಚಾತೈಲ ಪಡೆಯುತ್ತಿರುವ ಭಾರತ ಲಾಭ ಪಡೆಯುತ್ತಿದೆ. ನಿರ್ವಹಣೆ ಹಾಗೂ ಕಚ್ಚಾತೈಲ ಬೆಲೆ ಏರಿಕೆಯಿಂದ ನಷ್ಟದಲ್ಲಿದ್ದ ಭಾರತದ ತೈಲ ಕಂಪನಿಗಳು ಈಗ ಸುಧಾರಿಸಿಕೊಂಡು ಲಾಭದತ್ತ ಹೆಜ್ಜೆ ಇಟ್ಟಿದೆ. ಇದರಿಂದಾಗಿ ಕಳೆದ ಹಲವು ದಿನಗಳಿಂದ ಜನಸಾಮಾನ್ಯರ ಬೇಡಿಕೆ ಆಗಿರುವ ಎಲ್‍ಪಿಜಿ ಸಿಲಿಂಡರ್ ಗಳು ತೈಲ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಪೂರೈಕೆ ಆಗುತ್ತಿದ್ದು, ಓಪೆಕ್ ದೇಶಗಳು ತಮ್ಮ ತೈಲ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ನಮಗೆ ಕೊರತೆಯಿಲ್ಲ ಎಂದು ಪೆಟ್ರೋಲಿಯನ್ ಮತ್ತು ಅನಿಲ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶ್ವದ ಪ್ರಮುಖ ತೈಲ ಉತ್ಪಾದನಾ ಹಾಗೂ ರಫ್ತಿನ ರಾಷ್ಟ್ರವಾದ ಸೌದಿ ಅರೇಬಿಯಾ ಜುಲೈನಿಂದ ಉತ್ಪಾದನೆ ಕಡಿತ ಮಾಡುವ ನಿರ್ಧಾರ ಮಾಡಿದೆ. ಆದರೆ ಇದರಿಂದ ನಮಗೇನೂ ಆತಂಕ ಇಲ್ಲ ಎಂದು ಹೇಳಿದ್ದಾರೆ.